೦ ಪಾಸಿಟಿವ್ ರಕ್ತದವರು ಸ್ನೇಹ ಜೀವಿಗಳು ಮತ್ತು ನಾಯಕರಾಗಿ ಬೆಳೆಯುತ್ತಾರೆ ಹಾಗಿದ್ರೆ ನಿಮ್ಮದು ಯಾವ ಗುಂಪು ಮತ್ತು ನಿಮ್ಮ ವ್ಯಕ್ತಿತ್ವ ಏನು ಗೊತ್ತಾ..!

ಅರೋಗ್ಯ ಉಪಯುಕ್ತ ಭಕ್ತಿ ಮತ್ತಷ್ಟು ಲೈಫ್ ಸ್ಟೈಲ್ ಸುದ್ದಿ

ಹೌದು ಮನುಷ್ಯನ ರಕ್ತದ ಮಾದರಿ ಸಹ ನಮ್ಮ ವ್ಯಕ್ತಿತ್ವದ ಬಗ್ಗೆ ಹೇಳುತ್ತದೆ ಕೆಲವೊಂದು ಅದ್ಯಾನದ ಪ್ರಕಾರ ಕೆಲವೊಂದು ಕುತೂಹಲಕಾರಿ ಅಂಶಗಳನ್ನು ಬೆಳಕಿಗೆ ತಂದಿದ್ದಾರೆ, ಹಾಗಿದ್ರೆ ಯಾವ ಗುಂಪಿನವರು ಹೇಗೆ ಇರುತ್ತಾರೆ ಅನ್ನೋದು ಇಲ್ಲಿದೆ ನೋಡಿ.

ಕೆಲ ಅಧ್ಯಯನದ ಪ್ರಕಾರ A ಗುಂಪಿನ ವ್ಯಕ್ತಿಗಳು ಹೆಚ್ಚು ಮೃದು ಮನಸಿನ ವ್ಯಕ್ತಿಗಳಾಗಿರುತ್ತರೆ, 0, B, ಮತ್ತು AB ಗಳು ಹೆಚ್ಚು “ಕಠಿಣ-ಮನಸ್ಸು” ಎಂದು ಈ ಅಧ್ಯಯನದ ಪ್ರಕಾರ ಕಂಡುಬರುತ್ತದೆ ಇನ್ನು ಉಳಿದಂತೆ ಇನ್ನು ಹೆಚ್ಚಿನ ಮಾಹಿತಿ ಈ ಕೆಳಗಿನಲ್ಲಿದೆ ನೋಡಿ.

ರಕ್ತದ ಗುಂಪು O : ಈ ಗುಂಪಿನ ವ್ಯಕ್ತಿಗಳು ಸ್ನೇಹಪರರೂ, ತಮ್ಮ ಕರ್ತ್ಯವ್ಯವನ್ನು ಎಷ್ಟೇ ತೊಡಕುಗಳಿದ್ದರೂ ನಿರ್ವಹಿಸಿ ನಾಯಕರಾಗುವ ಗುಣಗಳನ್ನು ಹೊಂದಿರುತ್ತೀರಾ, ದೃಢ ಸಂಕಲ್ಪವುಳ್ಳವರೂ, ಅತ್ಯಂತ ಪ್ರಾಮಾಣಿಕರು, ಕುತೂಹಲ ವ್ಯಕ್ತಪಡಿಸುವ ಮತ್ತು ಸ್ವ-ಅವಲಂಬಿತ ವ್ಯಕ್ತಿತ್ವದವರು ಆಗಿರುತ್ತೀರಾ.

ರಕ್ತದ ಗುಂಪು A : ಇವರು ತಮ್ಮ ಕರ್ತ್ಯವ್ಯಕ್ಕೆ ಪ್ರಥಮ ಆದ್ಯತೆ ನೀಡುವವರಾಗಿದ್ದು ಹೆಚ್ಚಿನ ಯಶಸ್ಸು ಪಡೆಯುತ್ತಾರೆ. ಇವರು ತಮ್ಮ ಉದ್ಯೋಗದಲ್ಲಿ ಉನ್ನತಿಯನ್ನು ಪಡೆಯಲು ತಮ್ಮ ಸಾಮರ್ಥ್ಯಕಿಂತ ಹೆಚ್ಚಿನ ಪ್ರಮಾಣದಲ್ಲಿ ತಮ್ಮ ಕೆಲಸಕ್ಕೆ ಗಮನಹರಿಸುವುದರಿಂದ ಅಸಾಧ್ಯವನ್ನು ಕೂಡ ಸಾಧಿಸಿ ತೋರಿಸಬಲ್ಲರು. ಭಾವನೆಗಳಿಗೆ ಬೆಲೆ ಕೊಡುವವರು, ಸೂಕ್ಷ್ಮ ಮತ್ತು ಬುದ್ಧಿವಂತರಾಗಿರುತ್ತಾರೆ. ಬಹಳ ಸಮಯ ಕೋಪವನ್ನು ಹಿಡಿದಿಟ್ಟುಕೊಳ್ಳುತ್ತಾರೆ. ಕೋಪ ಹೆಚ್ಚಾದರೆ ಇವರನ್ನು ತಡಿಯುವುದು ತುಂಬಾ ಕಷ್ಟದ ಕೆಲಸ. ಇವರು ಪರಿಪೂರ್ಣತಾವಾದಿಗಳು, ಜನರ ಮಾತುಗಳನ್ನು ಆಲಿಸುತ್ತಾರೆ ಇದರಿಂದಾಗಿ ಉತ್ತಮ ಸ್ನೇಹಿತರಾಗುತ್ತಾರೆ.

ರಕ್ತದ ಗುಂಪು B : ಈ ಗುಂಪಿನ ವ್ಯಕ್ತಿಗಳು ಸಮತೋಲಿತವಾಗಿರುತ್ತವೆ, ಸೃಜನಶೀಲರೂ, ತಮಾಷೆಯನ್ನು ಇಷ್ಟಪಡುವವರೂ, ದೂರದೃಷ್ಟಿಯುಳ್ಳವರೂ, ಇತರರ ದೃಷ್ಟಿಕೋನವನ್ನು ಸುಲಭವಾಗಿ ಅರ್ಥೈಸಿಕೊಳ್ಳುತ್ತಾರೆ, ಇನ್ನೊಂದು ಕಡೆ ಇವರು ಅನೇಕವೇಳೆ ಸವಾಲು ಎದುರಿಸಲು ಹಿಂಜರಿಯುತ್ತಿದ್ದಾರೆ. ಇತರರೊಡನೆ ಸುಲಭವಾಗಿ ಭಾವನೆಗಳನ್ನು ವ್ಯಕ್ತಪಡಿಸಲು ಹಿಂಜರಿಯುತ್ತಾರೆ.

ರಕ್ತದ ಗುಂಪು AB : ಈ ಗುಂಪಿನ ವ್ಯಕ್ತಿಗಳು ಆಧ್ಯಾತ್ಮಿಕತೆ ವಿಚಾರಗಳ ಕಡೆಗೆ ಗಮನ ನೀಡುತ್ತಿರುತ್ತಾರೆ, ವಿಶ್ವಾಸ ಅರ್ಹರು, ಸ್ನೇಹಪರರು, ದೂರದೃಷ್ಟಿಯುಳ್ಳವರು, ಅಪಾರ ಬುದ್ದಿವಂತರು ಮತ್ತು ತತ್ವಜ್ಞಾನಿಗಳೂ ಆಗಿರುತ್ತಾರೆ. ಇವರು ತಮಾಷೆಯನ್ನು ಇಷ್ಟಪಡುವವರೂ ತಮ್ಮ ಸುತ್ತಮುತ್ತಲಿನವರನ್ನು ನಗಿಸುತ್ತಾ ಇರುವವರೂ ಆಗಿರುತ್ತಾರೆ.

Leave a Reply

Your email address will not be published. Required fields are marked *