ಇಂಗುವನ್ನು ಪ್ರತಿನಿತ್ಯ ಅಡುಗೆ ರುಚಿಯನ್ನು ಇಮ್ಮಡಿಗೊಳಿಸಲು ಮನೆಗಳಲ್ಲಿ ಬಳಸುತ್ತಾರೆ. ಇಂಗು ತೆಂಗು ಇದ್ದರೆ ಮಂಗಮ್ಮನ ಅಡುಗೆಯು ರುಚಿಕರವಾಗುತ್ತದೆ ಎಂಬ ಗಾಧೆ ಮಾತಿದೆ. ಇಂಗು ಅಡುಗೆಯ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಉತ್ತಮ ಔಷಧವು ಕೂಡ ಹೌದು
ಇಂಗಿನಿಂದ ಶ್ವಾಸನಾಳದಲ್ಲಿ ಕಫ ಕಟ್ಟಿಕೊಂಡಿದ್ದರೆ ಅದು ನೀರಾಗುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಇಂಗು ಬಹುಬೇಗನೇ ನಿವಾರಣೆ ಮಾಡುತ್ತದೆ. ಗ್ಯಾಸಿನಿಂದ ಬರುವ ಹೊಟ್ಟೆನೋವಿಗೆ ಇಂಗು ಬೆರೆಸಿದ ಮಜ್ಜಿಗೆ ರಾಮಬಾಣ. ಆಮಶಂಕೆ ಇರುವ ಕರುಳುಗಳಿಗೆ ಶಕ್ತಿಯನ್ನು ನೀಡಿ ಮಲ ಪ್ರವೃತ್ತಿ ಸರಿಯಾಗುವಂತೆ ಮಾಡುತ್ತದೆ ಮಧುಮೇಹ ನಿವಾರಕವಾಗಿರುವ ಇಂಗು ಕೊಲೆಸ್ಟ್ರಾಲ್ ಬರದಂತೆ ತಡೆಯುತ್ತದೆ. ಆರ್ಯುವೇದ ಔಷದಗಳಲ್ಲಿ ಇಂಗನ್ನು ಬಳಕೆ ಮಾಡುತ್ತಾರೆ ಶ್ವಾಸನಾಳದ ಬಾವು, ದಮ್ಮು, ಕೆಮ್ಮಿಗೆ ಇಂಗನ್ನು ಬಳಸಿದರೆ ಈ ರೋಗಗಳನ್ನು ತಡೆಗಟ್ಟಬಹುದು ನೀರಿನಲ್ಲಿ ಇಂಗು ಬೆರೆಸಿ, ಆ ನೀರನ್ನು ಮೊಡವೆಯ ಮೇಲೆ ಹಚ್ಚಿದರೆ ಮೊಡವೆಗಳು ಬೇಗ ಕಡಿಮೆಯಾಗುತ್ತವೆ
ಹೊಟ್ಟೆನೋವು ಹೊಟ್ಟೆ ಉಬ್ಬಿದಂತಾಗುವುದು, ಕರುಳಿನ ಸಮಸ್ಯೆಗಳಿಗೆ ಇಂಗು ಪರಿಣಾಮಕಾರಿ ಔಷದಿ ಚಳಿ ಜ್ವರ ಬಂದ ಸಂದರ್ಭದಲ್ಲಿ ಇಂಗು ಹಾಗೂ ಬೆಲ್ಲವನ್ನು ಮಿಶ್ರಣ ಮಾಡಿ ತಿಂದರೆ ಸ್ವಲ್ಪ ಸಮಯದಲ್ಲಿ ಜ್ವರ ಮಾಯವಾಗುತ್ತದೆ. ಕೆನೆ ಭರಿತ ಹಾಲಿನ ರುಚಿ ಹೆಚ್ಚಿಸಲು ಸ್ವಲ್ಪ ಹಿಂಗು ಬೆರೆಸಿ ಕುಡಿದರೆ ನಾಲಿಗೆಯ ರುಚಿ ಹೆಚ್ಚಾಗುವುದರ ಜೊತೆಗೆ ಜೀರ್ಣಾಂಗ ವ್ಯವಸ್ಥೆಯ ಆರೋಗ್ಯ ಕೂಡ ಹೆಚ್ಚುತ್ತದೆ. ಬೇಸಿಗೆ ದಿನಗಳಲ್ಲಿ *ದೇಹದ ತಾಪಮಾನವನ್ನು ಮತ್ತು ಬಿಸಿಲಿನ ಬೇಗೆಯಿಂದ ಎದುರಾಗುವ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಲು ಪ್ರತಿ ದಿನ ಹಿಂಗಿನ ಸೇವನೆ ಅತ್ಯಗತ್ಯ.ನೀರಿನಲ್ಲಿ ಇಂಗು ಬೆರೆಸಿ, ನಂತರ ಆ ನೀರನ್ನು ಮೊಡವೆಯ ಮೇಲೆ ಹಚ್ಚಬೇಕು. ಹೀಗೆ ಮಾಡುತ್ತಿದ್ದರೆ ಮೊಡವೆ ಬೇಗ ಕಡಿಮೆಯಾಗುತ್ತದೆ