ಯಾವ ಬಣ್ಣ ಯಾವ ರಾಶಿಗೆ ಲಕ್ ತಂದು ಕೊಡುತ್ತೆ .. ಹಾಗಾದ್ರೆ ನಿಮ್ಮ ರಾಶಿಗೆ ಯಾವುದು ಅದೃಷ್ಟದ ಬಣ್ಣ ?

ಉಪಯುಕ್ತ

ಪ್ರತಿಯೊಬ್ಬ ವ್ಯಕ್ತಿಗೆ ತನಗೆ ಗೊತ್ತಿಲ್ಲದಂತೆ ಕೆಲವೊಂದು ಬಣ್ಣಗಳನ್ನು ಇಷ್ಟ ಪಡುತ್ತಾನೆ. ಆದರೆ ಪ್ರತಿಯೊಂದು ರಾಶಿಯು ಅದಕ್ಕೆ ಪೂರಕವಾದ ಬಣ್ಣವನ್ನು ಹೊಂದಿರುತ್ತದೆ. ನಿಮ್ಮದು ಯಾವ ರಾಶಿ ಆ ರಾಶಿಗೆ ಯಾವ ಬಣ್ಣವು ಸೂಕ್ತ ಎಂಬುದರ ಬಗ್ಗೆ ತಿಳಿಯೋಣ

ಮೇಷ ರಾಶಿ: ಮಂಗಳ ಗ್ರಹವು ಮೇಷ ರಾಶಿಯ ಆಳುವ ಗ್ರಹವಾಗಿದೆ. ಕೆಂಪು ಬಣ್ಣ ಈ ರಾಶಿಗೆ ಉತ್ತಮ ಬಣ್ಣವಾಗಿದೆ.. ಕೆಂಪು ಬಣ್ಣದ ಜೊತೆಗೆ ಬಿಳಿ ಮತ್ತು ಹಳದಿ ಬಣ್ಣಗಳು ಈ ರಾಶಿಯವರಿಗೆ  ಅದೃಷ್ಟವನ್ನು ತಂದುಕೊಡುತ್ತವೆ. ಈ ರಾಶಿಯವರು  ನೀಲಿ, ಕಪ್ಪು ಮತ್ತು ಹಸಿರು ಬಣ್ಣದಿಂದ  ದೂರವಿದ್ದರೆ ಒಳಿತು

ವೃಷಭ ರಾಶಿ ಗುಲಾಬಿ ಮತ್ತು ಬಿಳಿ ಈ ರಾಶಿಯವರಿಗೆ ಲಾಭ ಮತ್ತು ಗೆಲುವನ್ನು ತಂದು ಕೊಡುತ್ತವೆ ಹಸಿರು ಬಣ್ಣ ಸಹ  ಈ ರಾಶಿಯವರಿಗೆ ಅದೃಷ್ಟವನ್ನು ತಂದು ಕೊಡುತ್ತದೆ . ಈ ರಾಶಿಯ ಜನರು ಹಳದಿ ಮತ್ತು ಕೆಂಪು ಬಣ್ಣಗಳಿಂದ ದೂರವಿರಬೇಕು.

ಮಿಥುನ ರಾಶಿ: ಈ ರಾಶಿಗೆ ಶುಭ ಬಣ್ಣಗಳು ತಿಳಿ ಹಳದಿ ಮತ್ತು ಹಸಿರು. ಗುಲಾಬಿ ಮತ್ತು ಬಿಳಿ ಬಣ್ಣಗಳು ಸಹ ಈ ರಾಶಿಯ ಜನರಿಗೆ ಅದೃಷ್ಟ. ನೀಲಿ ಮತ್ತು ಕೆಂಪು ಬಣ್ಣಗಳು ಕಡಿಮೆ ಬಳಸಿದರೆ ಒಳಿತು

ಕಟಕ ರಾಶಿ:  ಈ ರಾಶಿಗೆ ಚಂದ್ರನು ಆಳುವ ಗ್ರಹ. ಕಟಕ ರಾಶಿಯವರಿಗೆ  ಅದೃಷ್ಟದ ಬಣ್ಣಗಳು ಬಿಳಿ ಮತ್ತು ಕೆಂಪು. ನೀಲಿ ಮತ್ತು ಹಸಿರು ಬಣ್ಣದಿಂದ ಆದಷ್ಟು ಬಳಸುವುದನ್ನು ಕಡಿಮೆ ಮಾಡಬೇಕು

ಸಿಂಹ ರಾಶಿ :ಈ ರಾಶಿಯ ಆಳುವ ಗ್ರಹ ಸೂರ್ಯ. ಹಳದಿ ಮತ್ತು ಕಿತ್ತಳೆ ಬಣ್ಣಗಳು  ರಾಶಿಯವರಿಗೆ ಉತ್ತಮಕರ  ಗೋಲ್ಡನ್ ಬಣ್ಣ ಕೂಡ ಬಹಳ ಪ್ರಯೋಜನಕಾರಿ ನೀಲಿ ಮತ್ತು ಬಿಳಿ ಬಣ್ಣವು ಸಿಂಹ ರಾಶಿಗೆ ಅನಾನುಕೂಲಕರ ಬಣ್ಣಗಳು

ಕನ್ಯಾ ರಾಶಿ: ಈ ರಾಶಿಯವರು ಹಸಿರು, ತಿಳಿ ಹಳದಿ ಮತ್ತು ಬಿಳಿ ಬಣ್ಣಗಳನ್ನು ಕನ್ಯಾರಾಶಿ ಬಣ್ಣಗಳೆಂದು ಪರಿಗಣಿಸಲಾಗುತ್ತದೆ. ಸಾಧ್ಯವಾದಾಗಲೆಲ್ಲಾ, ಕನ್ಯಾರಾಶಿಯ ಜನರು ಕೆಂಪು ಬಣ್ಣದಿಂದ ದೂರವಿರಬೇಕು.

ತುಲಾ ರಾಶಿ  ಈ ರಾಶಿಯವರಿಗೆ ಅದೃಷ್ಟ ಎಂದು ನಂಬಲಾದ ಬಣ್ಣಗಳು ಬಿಳಿ ಮತ್ತು ತಿಳಿ ನೀಲಿ. ಈ ಬಣ್ಣಗಳನ್ನು ಹೆಚ್ಚು ಹೆಚ್ಚು ಬಳಸುವುದರಿಂದ ಜೀವನದಲ್ಲಿ ಸುಖ ನೆಮ್ಮದಿಯಿಂದ ಬಾಳಬಹುದು. ಈ ರಾಶಿಯವರು ಕೆಂಪು ಬಣ್ಣವನ್ನು ಹೆಚ್ಚು ಬಳಸಬಾರದು.

ವೃಶ್ಛಿಕ ರಾಶಿ  ಈ ರಾಶಿಯನ್ನು ಆಳುವ ಗ್ರಹ ಮಂಗಳ. ಆದ್ದರಿಂದ ಮಂಗಳನಿಗೆ ಅನುಕೂಲವಾಗುವಂತ ಬಿಳಿ, ಕೆಂಪು ಬಣ್ಣವನ್ನು ಬಳಸಿದರೆ ಅದೃಷ್ಟ ಕುಲಾಯಿಸುವುದು . ನೀಲಿ ಮತ್ತು ಹಸಿರು ಬಣ್ಣಗಳನ್ನು ಉಪಯೋಗಿಸುವಾಗ  ಸ್ವಲ್ಪ ಎಚ್ಚರದಿಂದ ಇರಬೇಕು

ಧನು ರಾಶಿ. ಧನು ರಾಶಿಯನ್ನು ಆಳುವ ಗ್ರಹ ಗುರು. ಕಡು ಹಳದಿ ಮತ್ತು ಕಿತ್ತಳೆ ಧನು ರಾಶಿಗೆ ಶುಭ. ಇದಲ್ಲದೆ, ಕೆನೆ ಮತ್ತು ಹಸಿರು ಬಣ್ಣಗಳು ಸಹ ಅದೃಷ್ಟಶಾಲಿ. ಧನು ರಾಶಿಗಳಿಗೆ ನೀಲಿ ಬಣ್ಣವು ಉತ್ತಮಕರವಲ್ಲ.

ಮಕರ ರಾಶಿ: ಸಂಕ್ರಾಂತಿಯ ಅದೃಷ್ಟ ಬಣ್ಣಗಳು ಖಾಕಿ, ಕಪ್ಪು ಮತ್ತು ನೇರಳೆ. ಕಂದು ಮತ್ತು ಕಡು ಹಸಿರು ಬಣ್ಣ  ಸಹ ಅನುಕೂಲಕರ.  ಮಕರ ರಾಶಿಯ ಜನರು ಕೆಂಪು ಮತ್ತು ಹಳದಿ ಬಣ್ಣದಿಂದ ದೂರವೀರಬೇಕು..

ಕುಂಭ ರಾಶಿ : ಶುಭ ಬಣ್ಣಗಳು ತಿಳಿ ನೀಲಿ ಮತ್ತು ನೇರಳೆ. ಬಿಳಿ ಬಣ್ಣವು ಸಹ ಈ ರಾಶಿಯವರಿಗೆ ಪ್ರಯೋಜನಕಾರಿ. ನೀಲಿ ಮತ್ತು ಹಸಿರು ಬಣ್ಣಗಳು ಉತ್ತಮ ಪಲಿತಾಂಶದ ಬಣ್ಣಗಳಲ್ಲ…

ಮೀನ ರಾಶಿ: ಹಳದಿ ಮತ್ತು ಕಿತ್ತಳೆ ಬಣ್ಣಗಳು  ಮೀನ ರಾಶಿಗೆ ಶುಭ ಬಣ್ಣಗಳಾಗಿವೆ. ಈ ಬಣ್ಣಗಳ ಹೊರತಾಗಿ, ಗುಲಾಬಿ ಬಣ್ಣವು ಅದೃಷ್ಟಶಾಲಿಯಾಗಿದೆ. ಈ ರಾಶಿಯವರು ಕಪ್ಪು ಬಣ್ಣವನ್ನು ಸಾಧ್ಯವಾದಷ್ಟರ ಮಟ್ಟಿಗೆ ಕಡೆಗಣಿಸಿದರೆ ಒಳ್ಳೆಯದು ..

Leave a Reply

Your email address will not be published. Required fields are marked *