ಬಾಯಿ ದುರ್ಗಂಧ ನಿವಾರಣೆಗೆ ಈ ಅದ್ಬುತ ಮನೆಮದ್ದುಗಳು ಬಳಸಿ

ಅರೋಗ್ಯ

ಬಾಯಿ ದುರ್ಗಂಧದ ಸಮಸ್ಯೆ ಕೆಲವರಿಗೆ ಹೆಚ್ಚಾಗಿ ಇರುತ್ತದೆ. ಈ ಸಮಸ್ಯೆ ಕೆಲವೊಂದು ಸಾರಿ ಮುಜಗರಕ್ಕೆ ಒಳಗಾಗುವಂತೆ  ಮಾಡುತ್ತದೆ. ಬಾಯಿ ದುರ್ಗಂಧದ ಸಮಸ್ಯೆಯನ್ನು ಕೇವಲ ಮನೆಯಲ್ಲಿರುವ ವಸ್ತುಗಳಿಂದ ನಿರ್ಮೂಲನೆ ಮಾಡಬಹುದು

ಬಾಯಿ ದುರ್ಗಂಧದ ಸಮಸ್ಯೆ ಇರುವವರು ಈ ಟಿಪ್ಸ್ ಗಳನ್ನು ಫಾಲೋ ಮಾಡಿ ಸಾಕು..

ದಿನಕ್ಕೆ ಎರಡು ಬಾರಿ ಬ್ರೇಶ್ ಮಾಡಿ. ಇದನ್ನು ಪ್ರತಿ ನಿತ್ಯ ಮಾಡಿದರೆ ಬಾಯಿ ದುರ್ಗದದ ಸಮಸ್ಯೆಯಿಂದ ಹೊರಬರಬಹುದು. ಪುದೀನಾ ಎಲೆಗಳನ್ನು ಬಾಯಿಗೆ ಹಾಕಿ ಕೊಂಡು ಅಗಿಯಿರಿ. ಪ್ರತಿಸಾರಿ ನೀವು ಊಟ ಮಾಡಿದ ಬಳಿಕ ಬಾಯಿ ಮುಕ್ಕಳಿಸುವುದನ್ನ ಮರೆಯಬೇಡಿ. ಯಾಕೆಂದರೆ ಅಹಾರವು ಹಲ್ಲಿನ ಸಂಧಿಗಳಲ್ಲಿ ಸಿಲುಕಿ ಹಾಕಿಕೊಂಡಿರುತ್ತದೆ ಹಾಗಾಗಿ ಬಾಯಿ ಮುಕ್ಕಳಿಸುವುದರಿಂದ ಹಲ್ಲಿನ ಸಂಧಿಗಳಲ್ಲಿರುವ ಆಹಾರ ಹೊರಬರುತ್ತದೆ

ಈರುಳ್ಳಿ, ಬೆಳುಳ್ಳಿಯನ್ನು ಸಾಧ್ಯವಾದಷ್ಟು ಕಡಿಮೆ ಸೇವಿಸಬೇಕು,ಬಾಯಿಯಲ್ಲಿ ಲವಂಗವನ್ನು ಹಾಕಿಕೊಂಡು ಅಗಿಯುವುದರಿಂದಲೂ ಬಾಯಿ ದುರ್ವಾಸನೆಯಿಂದ ದೂರಾಗಬಹುದು. ಬೇಕಿಂಗ್  ಸೋಡಾದಿಂದ ಹಲ್ಲನ್ನು ಉಜ್ಜಿ. ಬಿಸಿ ನೀರಿಗೆ ಸ್ವಲ್ಪ ಪ್ರಮಾಣದ ಉಪ್ಪು, ಗಂಧವನ್ನು ಬೆರಸಿ ಚೆನ್ನಾಗಿ ಬಾಯಿಯನ್ನು ಮುಕ್ಕಳಿಸಿ

ಬಡೇಸೋಂಪಿನ ಬ್ಯಾಕ್ಟೀರಿಯಾ ನಿರೋಧಕ ಗುಣಲಕ್ಷಗಳು ಬಾಯಿ ದುರ್ಗಂಧದ ವಿರುದ್ದ ಹೋರಾಡಲು ಸಹಾಯ ಮಾಡಬಹುದು. ಸ್ವಲ್ಪ ಪ್ರಮಾಣದಲ್ಲಿ ಬಡೇಸೋಂಪನ್ನು ಅಗಿಯಿರಿ. ಶುಂಠಿ ಸುಟ್ಟು ಬೂದಿ ಮಾಡಿ ಅದಕ್ಕೆ ಸ್ವಲ್ಪ ಉಪ್ಪು ಬೆರೆಸಿ ಹಲ್ಲು ಉಜ್ಜುವುದರಿಂದ ಬಾಯಿ ವಾಸನೆ ಕಡಿಮೆಯಾಗುತ್ತದೆ

Leave a Reply

Your email address will not be published. Required fields are marked *