ನೊಗ ಎಳೆದು ಉಳುಮೆ ಮಾಡುತ್ತಿದ್ದ ಹುಡುಗಿರ ಕುಟುಂಬಕ್ಕೆ ಟ್ರಾಕ್ಟರ್ ಕಳುಹಿಸಿದ ಸೋನ್ ಸೂದ್

ಸುದ್ದಿ
ನೊಗ ಎಳೆದು ಉಳುಮೆ ಜಮೀನನ್ನು ಉಳುಮೆ ಮಾಡುತ್ತಿರುವ ಇಬ್ಬರು ಹುಡುಗಿಯರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ  ವ್ಯಾಪಕವಾಗಿ  ವೈರಲ್ ಆಗಿತ್ತು.
ಇದಕ್ಕೆ ಟ್ವೀಟ್ ನಲ್ಲಿ ಪ್ರತಿಕ್ರಿಯಿಸಿರುವ  ಬಾಲಿವುಡ್ ನಟ ಸೋನು ಸೂದ್ ಅವರ ಕುಟುಂಬಕ್ಕೆ ಟ್ರ್ಯಾಕ್ಟರ್ ಒದಗಿಸುವ ಭರವಸೆ ನೀಡಿದ್ದಾರೆ.  ಈ ಮೂಲಕ ಸೋನ್ ಸೂದ್ ಮತ್ತೊಮ್ಮೆ ಹೃದಯ ವೈಶಾಲತೆ ಮೆರದಿದ್ದಾರೆ.
ಚಿತ್ತೂರು ಜಿಲ್ಲೆಯ ಮದನಪಲ್ಲೆಯಲ್ಲಿ ಹಲವು ವರ್ಷಗಳಿಂದ ಚಹಾ ಅಂಗಡಿಯೊಂದನ್ನು ನಡೆಸುತ್ತಿದ್ದ ನಾಗೇಶ್ವರ ರಾವ್ ಕುಟುಂಬ ಲಾಕ್ ಡೌನ್ ನಿಂದಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು. ಹಣ ಇಲ್ಲದಿದ್ದರಿಂದ ಎತ್ತುಗಳಿಗೆ ಕೂಲಿ ಕೊಡಲಾಗದೇ ಇಬ್ಬರು ಹೆಣ್ಣು ಮಕ್ಕಳನ್ನು ನೆಗಿಲು ಎಳೆದು ಬಿತ್ತನೆ ಮಾಡುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿತ್ತು.
ಆ ಹೆಣ್ಣು ಮಕ್ಕಳು  ನೊಗವನ್ನು ಎಳೆದುಕೊಂಡು ಉಳುಮೆ ಮಾಡುತ್ತಿರುವುದನ್ನು ನೋಡಿದರೆ ಎಂತವರಿಗೆ ಕರಳು ಚುರುಕ್ ಅನ್ನದೇ ಇರದು.
ಟ್ವಿಟ್ಟರ್ ನಲ್ಲಿ ಈ ಸುದ್ದಿ ನೋಡಿದ ನೋಡಿದ ಸೂದ್, ಆ ಹುಡುಗಿಯರು ಶಿಕ್ಷಣದ ಬಗ್ಗೆ ಗಮನಹರಿಸಲಿ ನಾನು  ಅವರ ಕುಟುಂಬಕ್ಕೆ ಒಂದು ಜೋಡಿ ಎತ್ತುಗಳನ್ನು ಕೊಡಿಸುತ್ತೆನೆ ಎಂದು ಸೋನ್ ಸೂದ್ ಟ್ವೀಟ್ ಮಾಡಿದ್ದಾರೆ.

“ನಾಳೆ ಬೆಳಿಗ್ಗೆ ಹೊಲವನ್ನು ಉಳುಮೆ ಮಾಡಲು ಒಂದು ಜೋಡಿ ಎತ್ತುಗಳು ನಿಮ್ಮ ಕುಟುಂಬಕ್ಕೆ ಬರಲಿವೆ. ಆ ಹುಡುಗಿಯರು ತಮ್ಮ ಶಿಕ್ಷಣದತ್ತ ಗಮನ ಹರಿಸಲಿ. ರೈತ ನಮ್ಮ ದೇಶದ ಹೆಮ್ಮೆ. ಅವರನ್ನು ರಕ್ಷಿಸಿ” ಎಂದು ಸೂದ್ ಟ್ವೀಟ್ ಮಾಡಿದ್ದಾರೆ
ನಂತರದ ಮತ್ತೊಂದು ಟ್ವೀಟ್‌ ಮಾಡಿ: “ಈ ಕುಟುಂಬವು ಒಂದು ಜೋಡಿ ಎತ್ತುಗಳಿಗೆ ಅರ್ಹರಲ್ಲ, ಅವರು ಟ್ರ್ಯಾಕ್ಟರ್‌ಗೆ ಅರ್ಹರು. ಆದ್ದರಿಂದ ನಿಮಗೆ ಒಂದನ್ನು ಟ್ರಾಕ್ಟರ್ ಒಂದನ್ನು ಕಳುಹಿಸಿ. ಕೊಡುವೆ ಎಂದು ಮಾನವೀಯತೇ ಮೆರೆದಿದ್ದಾರೆ ಸೋನ್ ಸೂದ್  

ಟ್ರಾಕ್ಟರ್‌ಗೆ ಬಾಡಿಗೆಗೆ ಗಂಟೆಗೆ 1,500 ರೂ. ಪಾವತಿಸಲು ಸಾಧ್ಯವಾಗದ ಕಾರಣ, ಎಲ್ಲಾ ಕೆಲಸಗಳನ್ನು ತಾವೇ ಮಾಡಲು ನಿರ್ಧರಿಸಿದ್ದೇವೆ ಎಂದು ಹೆಣ್ಣುಮಕ್ಕಳ ತಾಯಿ ಲಲಿತಾ ಹೇಳಿದ್ದಾರೆ

Leave a Reply

Your email address will not be published. Required fields are marked *