ನೀವು ಹೊಸದಾಗಿ ಮನೆ ಕಟ್ಟುತ್ತಿದ್ದೀರಾ.. ? ಹಾಗದ್ರೆ ನೀವು ಈ ಕೆಲಸ ಖಂಡಿತವಾಗ್ಲು ಮಾಡಲೇಬೇಕು

ಲೈಫ್ ಸ್ಟೈಲ್

ವಾಸ್ತು ಶಾಸ್ತ್ರದ ಪ್ರಕಾರ ಮನೆಯನ್ನ ಕಟ್ಟಿದರೆ ಅಲ್ಲಿ  ಸಕಾರಾತ್ಮಕ ಶಕ್ತಿಯು ಹೆಚ್ಚುತ್ತದೆ. ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ, ಪ್ರತಿ ಮನೆ ತನ್ನದೇ ಆದ ಶಕ್ತಿಯ ಪ್ರಕಾರಗಳನ್ನು ಹೊಂದಿರುತ್ತದೆ. ವಾಸ್ತು ಶಾಸ್ತ್ರವು ಮನೆಯೊಂದರ ಪ್ರವೇಶದ್ವಾರದಿಂದ ಹಿಡಿದು ಮಲಗುವ ಕೋಣೆ, ಅಡುಗೆಮನೆ, ಸ್ನಾನಗೃಹ, ಯಾವ ದಿಕ್ಕಿನಲ್ಲಿದ್ದರೆ ಆ ಮನೆಯಲ್ಲಿ ಸುಖ ಶಾಂತಿಯಿಂದ ಜೀವನವನ್ನು ನಡೆಸಬಹುದು ಎಂಬುದನ್ನು ತಿಳಿಸುತ್ತದೆ. ಮನೆಯನ್ನು ಯಾವ ಪ್ರಕಾರ ಕಟ್ಟಿದರೆ ಒಳಿತು, ವಾಸ್ತು ಪ್ರಕಾರ ಮನೆಯನ್ನು ಕಟ್ಟಬೇಕೋ ಅಥವಾ ಹಾಗೇ ವಾಸ್ತು ಇಲ್ಲದೇ ಮನೆಯನ್ನ ಕಟ್ಟಬೇಕೋ  ಎಂಬ ಹಲವಾರು ಪ್ರಶ್ನೆಗಳು ಎಲ್ಲರಲ್ಲೂ  ಉದ್ಬವಿಸುತ್ತವೆ. ಇಂತಹ ಪ್ರಶ್ನೆಗಳಿಗೆ  ಇಲ್ಲಿದೆ ಉತ್ತರ

ಮನೆಯ ಮುಖ್ಯ ಬಾಗಿಲು ಮನೆಯ   “ವಿಜಯದ ಗೆಲುವು ಮತ್ತು ಜೀವನದಲ್ಲಿ ಪ್ರಗತಿ” ಎಂದು ಕರೆಯಲ್ಪಡುವ  ಮುಖ್ಯ ಬಾಗಿಲು ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿರಬೇಕು. ನಿಮ್ಮ ಮನೆಯ ಮುಖ್ಯ ಬಾಗಿಲನ್ನು ಉತ್ತಮ ಗುಣಮಟ್ಟದ ಮರದಿಂದ ನಿರ್ಮಿಸಬೇಕು. ಇದು ನಿಮ್ಮ ಮನೆಯ ಇತರ ಬಾಗಿಲುಗಳಿಗಿಂತ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಮುಖ್ಯ ಬಾಗಿಲಿನ ಬಳಿ ಸ್ನಾನಗೃಹ ಇರಬಾರದು. ಪ್ರಾಣಿಗಳ ಪ್ರತಿಮೆಗಳು ಮುಖ್ಯ ಬಾಗಿಲಿನ ಬಳಿ ಇಡಬಾರದು .

ಸ್ಟೋರ್  ರೂಮ್ : ಮನೆಯ ಸ್ಟೋರ್ ರೂಮ್ ಪೂರ್ವ, ಉತ್ತರ ಅಥವಾ ಈಶಾನ್ಯಕ್ಕೆ ಮುಖ ಮಾಡಬೇಕು. ಪರ್ಯಾಯವಾಗಿ, ವಾಯುವ್ಯ ದಿಕ್ಕಿನ ಕೋಣೆಯು ಸಹ ಅನುಕೂಲಕರವಾಗಿದೆ ಭಾರಿ ಪೀಠೋಪಕರಣಗಳನ್ನು ಕೊಣೆಯ ಪಶ್ಚಿಮ ಅಥವಾ ನೈರುತ್ಯ ದಿಕ್ಕಿನಲ್ಲಿ ಇಡಬೇಕು. ಎಲೆಕ್ಟ್ರಾನಿಕ್ಸ್  ಉಪಕರಣಗಳು ಏನಾದರೂ ಇದ್ದರೆ ಅವುಗಳುನ್ನು ರೂಂನ  ಆಗ್ನೇಯ ದಿಕ್ಕಿನಲ್ಲಿಟ್ಟರೆ ಒಳಿತು

ಮನೆಯ ಹಾಲ್ :ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಹಾಲ್ ಅನ್ನು ಬ್ರಹ್ಮಸ್ಥಾನ ಎಂದು ಕೆರೆಯಲಾಗುತ್ತದೆ . ಇದು ಮನೆಯ ಕೇಂದ್ರವಾಗಿದ್ದು  ಇದನ್ನು ಮನೆಯ ಪವಿತ್ರ ಹಾಗೂ  ಶಕ್ತಿಯುತ ವಲಯವೆಂದು ಕರೆಯಲಾಗುತ್ತದೆ ಬ್ರಹ್ಮಸ್ಥಾನವು ಅಪಾರ ಸಕರಾತ್ಮಕ ಶಕ್ತಿಯನ್ನು ಸೃಷ್ಟಿಸುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ

ಮಲಗುವ ಕೋಣೆ: ಮಲಗುವ ಕೊಣೆ  ನೈರುತ್ಯ ದಿಕ್ಕಿನಲ್ಲಿರುವ ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ತರುತ್ತದೆ. ಮನೆಯ ಈಶಾನ್ಯ ಅಥವಾ ಆಗ್ನೇಯ ದಿಕ್ಕಿನಲ್ಲಿ  ಮಲಗುವ ಕೋಣೆ ಬರದಂತೆ ಎಚ್ಚರವಹಿಸಿ, ಏಕೆಂದರೆ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು, ದಂಪತಿಗಳಲ್ಲಿ ಜಗಳಕ್ಕೆ ಕಾರಣವಾಗಬಹುದು. ಹಾಸಿಗೆಯನ್ನು ಮಲಗುವ ಕೋಣೆಯ ನೈರುತ್ಯ ಮೂಲೆಯಲ್ಲಿ ಇಡಬೇಕು , ನಿಮ್ಮ ತಲೆಯು ಪಶ್ಚಿಮಕ್ಕೆ ಮುಖ ಮಾಡಿ ಮಲಗಬೇಕು ಹಾಸಿಗೆಯ ಮುಂದೆ ಕನ್ನಡಿ ಅಥವಾ ಟಿವಿಯನ್ನು ಇಡುವುದನ್ನು ತಪ್ಪಿಸಿ. ಹಾಸಿಗೆಯಲ್ಲಿರುವಾಗ ನಿಮ್ಮ ಪ್ರತಿಬಿಂಬವನ್ನು ಕನ್ನಡಿಯಲ್ಲಿ ನೋಡಬಾರದು

 

Leave a Reply

Your email address will not be published. Required fields are marked *