ದೇಹದ ಯಾವ ಯಾವ ಭಾಗದಲ್ಲಿ ಮಚ್ಚೆ ಇದ್ರೆ ಅದರ ಅರ್ಥ ಏನು ಗೊತ್ತಾ..!

ಅರೋಗ್ಯ ಉಪಯುಕ್ತ ಭಕ್ತಿ ಮತ್ತಷ್ಟು ಲೈಫ್ ಸ್ಟೈಲ್ ಸುದ್ದಿ

ದೇಹದ ಯಾವ ಯಾವ ಭಾಗಗಳಲ್ಲಿ ಮಚ್ಚೆಗಳಿರುವುದರಿಂದ ಯಾವ ಯಾವ ಅರ್ಥ ನೀಡುತ್ತದೆ ಎಂದು ತಿಳಿದುಕೊಳ್ಳೊಣ ಬನ್ನಿ

ಪಾದದಲ್ಲಿ ಸಣ್ಣದಾಗಿ ಕಪ್ಪು ಬೊಟ್ಟು ಇದ್ದರೆ ಆ ವ್ಯಕ್ತಿಯು ಟ್ರಾವೆಲ್ ಮಾಡುತ್ತಾನೆ ಎಂದರ್ಥ.ಬಲಗೈ ಮೇಲೆ ಮಚ್ಚೆ ಇರುವವರಿಗೆ ಶುಭವಾಗಿದೆ ಮತ್ತು ಎಡಗೈನ ಅಂಗೈ ಮೇಲೆ ಮಚ್ಚೆ ಇರುವವರು ಹಣ ವ್ಯಯ ಹೆಚ್ಚು ಮಾಡುತ್ತಾರೆ.

ತಲೆಯ ಬಲಭಾಗದಲ್ಲಿ ಮಚ್ಚೆ ಇರುವವರಿಗೆ ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನ ಮಾನ ಲಭಿಸುತ್ತದೆ.ಕೈಯಲ್ಲಿ ಕಡು ಕೆಂಪು ಬಣ್ಣವಿದ್ದರೆ ಅವರ ಕೌಶಲ್ಯ ಅಥವಾ ಲಕ್‌ನ ಸಂಕೇತ ಎನ್ನುತ್ತಾರೆ.

ಬೆನ್ನಿನಲ್ಲಿ ಮಚ್ಚೆ ಇದ್ದರೆ ಕೆಲವು ರೀತಿಯ ಹೊರೆಯನ್ನು ಒಯ್ಯುತ್ತೀರಿ ಹಾಗೂ ದೇಹದ ಮುಂಭಾಗದಲ್ಲಿದ್ದರೆ ಯಶಸ್ಸನ್ನು ಆಕರ್ಷಿಸುತ್ತದೆ ಎಂಬ ನಂಬಿಕೆ ಇದೆ.ಎರಡೂ ಭುಜಗಳ ಮಧ್ಯೆ ಮಚ್ಚೆ ಇದ್ದವರು ಪರೋಪಕಾರಿ, ಉದಾರಿಯಾಗಿರುತ್ತಾರೆ.

ಮೂಗಿನ ಬಲಬಾಗದಲ್ಲಿ ಮಚ್ಚೆ ಇದ್ದವರಿಗೆ ಧನ ಸಂಪತ್ತು ಮತ್ತು ಮೂಗಿನ ಎಡಭಾಗದಲ್ಲಿ ಮಚ್ಚೆ ಇದ್ದವರು ಪರಿಶ್ರಮಿಗಳು ಮತ್ತು ಸಫಲತೆಯನ್ನು ಅನುಭವಿಸುತ್ತಾರೆ.

ಎಡ ಗಲ್ಲದ ಮೇಲೆ ಮಚ್ಚೆ ಇರುವವರಿಗೆ ಶುಭ ಎಂದು ನಂಬಲಾಗುವುದಿಲ್ಲ. ಇವರಿಗೆ ಗೃಹಸ್ಥ ಜೀವನದಲ್ಲಿ ಹಣದ ಅಭಾವವಿರುತ್ತದೆ.

ಗದ್ದದ ಮೇಲೆ ಮಚ್ಚೆ ಇರುವವರು ಆರೋಗ್ಯವಂತರು, ವ್ಯಕ್ತಿವಾದಿ, ಸ್ವಃ ಹಿತದಾರಿಗಳಾಗಿರುತ್ತಾರೆ. ಕಂಠದ ಮೇಲೆ ಮಚ್ಚೆ ಇರುವವರು ಚಾಣಾಕ್ಷರಾಗಿರುತ್ತಾರೆ.

Leave a Reply

Your email address will not be published. Required fields are marked *