ದಿನ ಭವಿಷ್ಯ :ಸಿಂಹ ರಾಶಿಯವರಿಗೆ ಇಂದು ಉತ್ತಮ ದಿನ, ಇನ್ನೂಳಿದ ರಾಶಿಯವರ ಫಲಾಫಲ ಇಲ್ಲಿದೆ

ಭಕ್ತಿ

ಮೇಷ: ಮಕ್ಕಳಿಂದ ಅನುಕೂಲ, ಗರ್ಭ ದೋಷ, ಸಂತಾನಕ್ಕೆ ಸಮಸ್ಯೆ, ಜೂಜು-ರೇಸ್‍ಗಳಲ್ಲಿ ಭಾಗಿ, ಅಕ್ರಮ ಚಟುವಟಿಕೆಯಲ್ಲಿ ತೊಡಗುವಿರಿ, ದೇವತಾ ಕಾರ್ಯದಲ್ಲಿ ಅಡೆತಡೆ.

ವೃಷಭ: ಸಂಗಾತಿಯಲ್ಲಿ ಅಹಂಭಾವ, ಆತುರ ಸ್ವಭಾವದಿಂದ ನೋವು, ಪತ್ರ ವ್ಯವಹಾರಗಳಲ್ಲಿ ನಷ್ಟ, ಮಾಡುವ ಕಾರ್ಯದಲ್ಲಿ ಸಮಸ್ಯೆ, ರಾಜಕೀಯ ವ್ಯಕ್ತಿಗಳಿಂದ ತೊಂದರೆ, ವಾಹನ ಚಾಲನೆಯಲ್ಲಿ ಎಚ್ಚರ, ಯಂತ್ರೋಪಕರಣಗಳಿಂದ ಪೆಟ್ಟು.

ಮಿಥುನ: ರಕ್ತ ದೋಷ, ರೋಗ ಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ, ಸ್ನೇಹಿತರಿಂದ ಸಂಕಷ್ಟ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಹೇಳಿಕೆ ಮಾತುಗಳಿಂದ ದಾಂಪತ್ಯದಲ್ಲಿ ಕಲಹ.

ಕಟಕ: ವಿಪರೀತ ಆರ್ಥಿಕ ನಷ್ಟ, ಸ್ವಯಂಕೃತ್ಯಗಳಿಂದ ನಷ್ಟ, ಮಕ್ಕಳು ಶತ್ರುವಾಗುವರು, ಅವಕಾಶಗಳು ಕೈತಪ್ಪುವುದು, ಮೇಲಾಧಿಕಾರಿಗಳಿಂದ ಕಿರಿಕಿರಿ, ವಾದ-ವಿವಾದ ಹೆಚ್ಚಾಗುವುದು, ಉದ್ಯೋಗಕ್ಕೆ ಕಂಟಕ.

ಸಿಂಹ: ವ್ಯಾಪಾರ-ವ್ಯವಹಾರದಲ್ಲಿ ಜಯ, ಉದ್ಯೋಗದಲ್ಲಿ ಲಾಭ, ಧಾರ್ಮಿಕ ಕ್ಷೇತ್ರಗಳಿಗೆ ಪ್ರಯಾಣ, ಮೋಜು-ಮಸ್ತಿಯಲ್ಲಿ ತೊಡಗುವಿರಿ, ಸ್ಪರ್ಧಾತ್ಮಕ ಕೆಲಸಗಳಲ್ಲಿ ಯಶಸ್ಸು, ಭೂ ವ್ಯವಹಾರಗಳಿಂದ ಧನಾಗಮನ.

ಕನ್ಯಾ: ವಾಹನ ಅಪಘಾತದಿಂದ ಪೆಟ್ಟು, ದಾಯಾದಿಗಳಿಂದ ತೊಂದರೆ, ಬಂಧುಗಳಿಂದ ನಷ್ಟ, ಪಿತ್ರಾರ್ಜಿತ ಆಸ್ತಿ ತಗಾದೆ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ, ರಾಜಕೀಯ ವ್ಯಕ್ತಿಗಳಿಂದ ಸಂಕಷ್ಟ.

ತುಲಾ: ಸಂಗಾತಿಯಲ್ಲಿ ಹಠ-ಅಹಂಭಾವ, ದಾಂಪತ್ಯದಲ್ಲಿ ಬಿರುಕು, ಮಾನಸಿಕ ವ್ಯಥೆ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಮಕ್ಕಳಿಂದ ಅನುಕೂಲ, ಆಕಸ್ಮಿಕ ಪ್ರಯಾಣ.

ವೃಶ್ಚಿಕ: ಉದ್ಯೋಗದಿಂದ ಧನಾಗಮನ, ಮೇಲಾಧಿಕಾರಿಗಳಿಂದ ಪ್ರಶಂಸೆ, ತಂದೆ ಮಾಡಿದ ಸಾಲ ಬಾಧೆ, ಗೌರವಕ್ಕೆ ಧಕ್ಕೆ, ಆತುರ ನಿರ್ಧಾರಗಳಿಂದ ಸಮಸ್ಯೆ, ವ್ಯವಹಾರಗಳಲ್ಲಿ ನಷ್ಟ.

ಧನಸ್ಸು: ಪ್ರೇಮ ವಿಚಾರದಲ್ಲಿ ಜಯ, ಮಕ್ಕಳಿಂದ ಅನುಕೂಲ, ಗರ್ಭಿಣಿಯರು ಎಚ್ಚರಿಕೆ, ದೇವತಾ ಕಾರ್ಯಗಳಲ್ಲಿ ಆಸಕ್ತಿ, ತಂದೆಯಿಂದ ಲಾಭ, ಪ್ರಯಾಣದಲ್ಲಿ ಅನುಕೂಲ.

ಮಕರ: ಭೂ ವ್ಯವಹಾರಗಳಲ್ಲಿ ತಗಾದೆ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ, ವಾಹನ ಚಾಲನೆಯಲ್ಲಿ ಎಚ್ಚರ, ಸಂಬಂಧಗಳಿಂದ ತೊಂದರೆ, ಮಾನಸಿಕ ವ್ಯಥೆ, ನಿದ್ರಾಭಂಗ, ತೆರಿಗೆ ಅಧಿಕಾರಿಗಳಿಂದ ಸಮಸ್ಯೆ.

ಕುಂಭ: ದಾಯಾದಿಗಳಿಂದ ಅನುಕೂಲ, ಸಂಗಾತಿಯಿಂದ ಲಾಭ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ನಾನಾ ಕ್ಷೇತ್ರದಲ್ಲಿ ಉದ್ಯೋಗಾವಕಾಶ.

ಮೀನ: ಮಕ್ಕಳಿಂದ ಧನಾಗಮನ, ಪ್ರಯಾಣದಲ್ಲಿ ಅಡೆತಡೆ, ತಂದೆಯೇ ಶತ್ರುವಾಗುವರು, ಅಧಿಕ ಉಷ್ಣ ಬಾಧೆ, ಆರೋಗ್ಯದಲ್ಲಿ ಏರುಪೇರು, ಮಾಂಗಲ್ಯಕ್ಕೆ ಕಂಟಕವಾಗುವ ಆತಂಕ.

 

Leave a Reply

Your email address will not be published. Required fields are marked *