ದಿನಾಲು ಖಾಲಿ ಹೊಟ್ಟೆಯಲ್ಲಿ 2 ರಿಂದ 3 ಹೋಳು ಪಪ್ಪಾಯಿ ಹಣ್ಣನ್ನು ತಿಂದರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ?

ಅರೋಗ್ಯ

ಪಪ್ಪಾಯಿ ಹಣ್ಣು ತಿನ್ನುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಪಪ್ಪಾಯಿ ಉಷ್ಣ ಪದಾರ್ಥವಾಗಿದ್ದು, ಇದರ ಹಣ್ಣು ಮತ್ತು ಕಾಯಿ ಎರಡನ್ನು ತಿನ್ನಲಾಗುತ್ತದೆ. ಪಪ್ಪಾಯಿಯನ್ನು ಹಣ್ಣು ಮತ್ತು ತರಕಾರಿಯಂತೆ ಅಡುಗೆಯಲ್ಲಿ ಬಳಸಲಾಗುತ್ತದೆ.  ಪಪ್ಪಾಯಿ ಹಣ್ಣು ತಿನ್ನುವುದರಿಂದ ಹಲವು ಆರೋಗ್ಯದ ಲಾಭಗಳಿವೆ

ಪಪ್ಪಾಯಿಯಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಗಳು ಮಲಬದ್ದತೆಯನ್ನು ನಿವಾರಿಸುತ್ತದೆ. ಯಕೃತ್(ಲಿವರ್) ಮತ್ತು ಕರುಳುಗಳಿಗೆ ಶಕ್ತಿ ನೀಡಿ ಶ್ವಾಸಕೋಶದ ಕ್ಯಾನ್ಸರ್ ರೋಗ ಬರುವುದನ್ನು ತಡೆಗಟ್ಟುತ್ತದೆ . ಯಾವಾಗಲು ಪಪ್ಪಾಯಿ ಹಣ್ಣು ತಿನ್ನುವವರಿಗೆ ದೇಹದಲ್ಲಿನ ಸಂಪೂರ್ಣ ಪ್ರತಿರೋಧಕ ವ್ಯವಸ್ಥೆಯು ವೃದ್ದಿಸುವುದು. ಕ್ಷಯ, ಕಣ್ಣಿನ ರೋಗ, ಅಜೀರ್ಣತೆ, ರಕ್ತ ಹೀನತೆ ಈ ರೋಗಗಳು ನಿಮ್ಮ ಹತ್ತಿರ ಕೂಡ ಬರುವುದಿಲ್ಲ ದೇಹದಲ್ಲಿನ ಸಂಪೂರ್ಣ ಪ್ರತಿರೋಧಕ ವ್ಯವಸ್ಥೆಯನ್ನು ಬಲಪಡಿಸುವುದು

ಪಪ್ಪಾಯ ಕಾಯಿಯ ರಸವನ್ನು ಕಜ್ಜಿ, ತುರಿಕೆಗಳಂತಹ ಚರ್ಮ ಸಮಸ್ಯೆಗಳಿಗೆ ಲೇಪಿಸಿದರೆ ರೋಗ ನಿವಾರಣೆಯಾಗುತ್ತದೆ .ಪಪ್ಪಾಯಿ ಹಣ್ಣಿನ ರಸ ಸ್ರ್ತೀಯರ ಮಾಸಿಕ ಸ್ರಾವದ ಕೊರತೆ ನೀಗಿಸುತ್ತದೆ. ಇದು. ದಿನಾಲೂ ಪಪ್ಪಾಯಿ ನಿಯಮಿತ ಸೇವಿಸುವುದರಿಂದ ರಕ್ತದೊತ್ತಡ ಡಯಾಬಿಟಿಸ್ ಕಾಯಿಲೆಯನ್ನು ಕಡಿಮೆ ಮಾಡುತ್ತದೆ.

ಚರ್ಮ ಬಣ್ಣ ಕಳೆದುಕೊಂಡಿದ್ದರೆ, ಅಂಗೈ ಹಳದಿ ಬಣ್ಣಕ್ಕೆ ತಿರುಗಿದ್ದರೆ ಇದನ್ನು ಪಪ್ಪಾಯ ಹಣ್ಣನ್ನು ಸೇವಿಸಬಹುದು. ಮಹಿಳೆಯರ ಮಾಸಿಕ ತೊಂದರೆ ಇದ್ದರೆ ಪಪ್ಪಾಯಿಯ ಬೀಜ ಒಣಗಿಸಿ ಚೂರ್ಣ ಮಾಡಿ ಒಂದು ಗ್ರಾಂ ಚೂರ್ಣವನ್ನು ಮುಂಜಾನೆ- ಸಂಜೆ ಬಿಸಿ ನೀರಿನೊಂದಿಗೆ ಸೇವಿಸದರೆ ತೊಂದರೆ ನಿವಾರಣೆಯಾಗುತ್ತದೆ. ದಿನ ನಿತ್ಯ ಪಪ್ಪಾಯವನ್ನು ತಿಂದರೆ ಕಿಡ್ನಿ ಸ್ಟೋನ್ ಉಂಟಾಗುವುದಿಲ್ಲ.ಮೂತ್ರ ಜನಕಾಂಗ ಉತ್ತಮವಾಗ ಕೆಲಸ ಮಾಡುತ್ತದೆ

ದಿನಾಲು ಖಾಲಿ ಹೊಟ್ಟೆಯಲ್ಲಿ  2 ರಿಂದ 3 ಹೋಳು ಪಪ್ಪಾಯಿ ಹಣ್ಣನ್ನು ತಿನ್ನಬೇಕು. ಜೊತೆಗೆ ಒಂದು ಹೋಳು ಮುಖಕ್ಕೆ ಹಚ್ಚಿಕೊಂಡರೆ ನಿಮ್ಮ ಮುಖ ಗುಲಾಭಿಯಂತೆ ಹೊಳೆಯುತ್ತದೆ

Leave a Reply

Your email address will not be published. Required fields are marked *