ಖಿನ್ನತೆ ಎಂಬ ಮನೋರೋಗದಿಂದ ಹೊರ ಬರುವುದು ಹೇಗೆ..?

ಅರೋಗ್ಯ

ಖಿನ್ನತೆಯು ಒಂದು ಖಾಯಿಲೆ. ಇದು ಹೆಚ್ಚಾಗಿ ಮನಸ್ಸಿನಲ್ಲೇ ಅಡಗಿ ಮಾನಸಿಕ ಕಾಯಿಲೆಯಾಗಿರುತ್ತದೆ. ಖಿನ್ನತೆಯಿಂದ ಬಳಲುವವರು ಈ ಬಗ್ಗೆ ಯಾರೊಂದಿಗೂ ಮುಕ್ತವಾಗಿ ಮಾತನಾಡುವುದಿಲ್ಲ, ಈ ಬಗ್ಗೆ ಹೇಳಿಕೊಂಡರೇ ನಮ್ಮನ್ನು ಅವರು ಅಪಹಾಸ್ಯ ಮಾಡುತ್ತಾರೆ ಎಂಬ ಭಾವನೆ ಹಾಗೂ ದುರ್ಬಲರು ಎನಿಕೊಳ್ಳುತ್ತೇವೆ ಎನ್ನುವ ಭಯದಿಂದ ದುಃಖವನ್ನು ಮುಚ್ಚಿಟ್ಟುಕೊಳ್ಳುತ್ತಾರೆ. ಧಿರ್ಘಕಾಲದ ಖಿನ್ನತೆ ಹೆಚ್ಚಾಗಿ  ಆತ್ಮಹತ್ಯೆಯ ದಾರಿಯುನ್ನು ತೊರಿಸುತ್ತದೆ. ನೀವು ಈ ಖಿನ್ನತೆಯನ್ನು ಹೊರಬೇಕೆಂದರೆ  ಈ ಮಾರ್ಗಗಳನ್ನು ಅನುಸರಿಸಿ

ನೀವು ಖಿನ್ನತೆಯಿಂದ ಬಳಲುತ್ತಿದ್ದರೆ ನಿಮಗೆ ಸಹಾಯದ ಅವಶ್ಯಕತೆ ಬೇಕು ಹಾಗಾಗಿ ಕುಟುಂಬ ಮತ್ತು ಸ್ನೇಹಿತರೊಂದಿಗೆ ಮನಬಿಚ್ಚಿ ಮಾತನಾಡಿ. ಇದರಿಂದ ಹೊರಬರಲು ಮಾನಸಿಕ ಆರೋಗ್ಯ ತಜ್ಞರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆಯಬೇಕು

ನಿಮ್ಮ ದಿನನಿತ್ಯ ಚ್ಟುವಟಿಕೆಯಲ್ಲಿ ಸರಿಪಡಿಸಿ ನಿರಂತರವಾಗಿ ಕಾರ್ಯಪ್ರವೃತ್ತರಾಗಿ   ಇದು  ಆರೋಗ್ಯಕ್ಕೆ ಒಳ್ಳೆಯದು. ಯೋಗ ಧ್ಯಾನ ಚಟುವಟಿಕೆಗಳನ್ನು ಮಾಡುವುದರಿಂದ ಖಿನ್ನತೆಯಿಂದ ದೂರಾಗಬಹುದು

 

ಅಪರಾಧಿ ಭಾವ, ಕೀಳರಿಮೆ ಇಂತಹ ನೆಗೆಟಿವ್  ಯೋಚನೆಗಳನ್ನು ಸಲಹೆಗಳ ಮೂಲಕ   ಸಕಾರಾತ್ಮಕ ಭಾವನೆಗಳಾಗಿ ಪರಿವರ್ತಿಸಲು ಪ್ರಯತ್ನಿಸಿ. ಖಿನ್ನತೆಯು ನಿದ್ರೆಯ ಮೇಲೆ ಹೆಚ್ಚು ಪರಿಣಾಮ ಬೀರುವುದರಿಂದ ಪ್ರತಿ ರಾತ್ರಿಯೂ ನಿದಿತ ಸಮಯಕ್ಕೆ ಮಲಗಿ, ಬೆಳಿಗ್ಗೆ ಸರಿಯಾದ ಸಮಯಕ್ಕೆ ಏಳಲು ಪ್ರಯತ್ನಿಸಿ.

ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಂದ ಸಹಾಯ ಪಡೆಯಿರಿ. ನೀವು ಬೇಗ ಗುಣಮುಖರಾಗಲು ಇದು ಅಗತ್ಯ. ಖಿನ್ನತೆಯಿಂದ ಹೊರಬರಲು ಆರೋಗ್ಯಕರ ವಾತಾವರಣ ಮತ್ತು ಆತ್ಮಸ್ಥೈರ್ಯ ಮುಖ್ಯ.

 

Leave a Reply

Your email address will not be published. Required fields are marked *