ಕಲ್ಪವೃಕ್ಷವೆಂದು ಕರೆಯಲ್ಪಡುವಂತಹ ತೆಂಗಿನ ಮರದ ಏಳನೀರಿನಲ್ಲಿ ಅನೇಕ ಔಷಧಿ ಗುಣಗಳಿರುತ್ತವೆ.ತೆಂಗಿನ ಮರವನ್ನು ಕಲ್ಪವೃಕ್ಷವೆಂದು ಕೆರೆಯುತ್ತಾರೆ. ಈ ಕಲ್ಪ ವೃಕ್ಷದ ಮರದಲ್ಲಿ ಸಿಗುವಂತಹ ಎಳನೀರು ಅನೇಕ ಕಾಯಿಲೆಗಳನ್ನು ದೂರ ಮಾಡುತ್ತದೆ ಪ್ರತಿನಿತ್ಯ ಎಳನೀರನ್ನು ಕುಡಿಯುವುದರಿಂದ ರೋಗಗಳು ಬರದಂತೆ ನಾವು ತಡೆಯಬಹುದಾಗಿದೆ. ಎಳನೀರು ದೇಹದ ಆರೋಗ್ಯವನ್ನು ಸದೃಢವಾಗಿಟ್ಟುಕೊಳ್ಳಲು ಅದರಲ್ಲಿರುವ ಪೋಷಕಾಂಶಗಳು ಸಹಾಯ ಮಾಡುತ್ತವೆ.
ಪ್ರತಿನಿತ್ಯ ಎಳನೀರು ಕುಡಿಯುವುದರಿಂದ ಆಗುವ ಲಾಭಗಳೆಂದರೆ
ಚರ್ಮ ರೋಗ ನಿವಾರಣೆ ದಿವ್ಯ ಔಷಧಿ ಎಳನೀರು :ಚರ್ಮದ ರೋಗ ಇರುವವರು ಈ ರೀತಿಯಾಗಿ ಮಾಡಿದರೇ ಚರ್ಮದ ಕಾಯಿಲೆಯಿಂದ ಮುಕ್ತವಾಗಬಹುದು. ಎಳನೀರನ್ನು ತೆಗೆದುಕೊಂಡು ಅದರಲ್ಲಿ ನಿಂಬೆರಸ ಹಾಗೂ ಜೇನುತುಪ್ಪವನ್ನು ಬೆರೆಸಿ ನಂತರ ಚರ್ಮಕ್ಕೆ ಹಚ್ಚಿದರೆ ಆ ಚರ್ಮ ರೋಗ ಹೋಗುತ್ತದೆ. ಜೊತೆಗೆ ಚರ್ಮವು ಕಾಂತಿಯುತವಾಗುತ್ತದೆ
ಸಕ್ಕರೆ ಕಾಯಿಲೆಗೂ ಮದ್ದು
ಸಾಮಾನ್ಯವಾಗಿ ಸಕ್ಕರೆ ಕಾಯಿಲೆಯಿರುವವರು ಸಿಹಿಯಾಗಿರುವ ಪದಾರ್ಥದಿಂದ ದೂರ ಉಳಿದಿರುತ್ತಾರೆ. ವಿಶೇಷವೆಂದರೆ ಎಳನೀರು ಬ್ಲಡ್ ಶುಗರ’ನ್ನು ಕಂಟ್ರೋಲ್ ಮಾಡುತ್ತದೆ ಎಳನೀರಿನಲ್ಲಿ ಮೆಗ್ನೀಸಿಯಮ್ ಹೆಚ್ಚಾಗಿರುವ ಕಾರಣ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
ಕಿಡ್ನಿ ಸ್ಟೋನ್ ತಡೆಯುತ್ತದೆ
ಎಳನೀರಿನಲ್ಲಿ ಅಮೃತ ಗುಣವಿದ್ದು ಕಿಡ್ನಿಯಲ್ಲಿ ಸ್ಟೋನ್ ಇರುವವರು ಹೆಚ್ಚಾಗಿ ನೀರು ಕುಡಿಯಬೇಕು. ಇದರ ಜೊತೆಗೆ ಪ್ರತಿನಿತ್ಯ ಏಳನೀರನ್ನು ಕುಡಿಯುವುದರಿಂದ ಕಿಡ್ನಿ ಸ್ಟೋನ್ ಆಗದಂತೆ ತಡೆಯಬಹುದು
ಹಲವು ರೋಗಗಳಿಗೆ ರಾಮಬಾಣ ಏಳನೀರು
ಎಳನೀರ ಸೇವನೆಯಿಂದ ದೇಹ ತಂಪಾಗಿರುತ್ತದೆ. ಏಳನೀರನ್ನು ಕುಡಿಯುವುದರಿಂದ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಬರುವುದಿಲ್ಲ.ಮಲಬದ್ದತೆ, ಬಿ.ಪಿ. ಡಯಾಬಿಟೀಸ್, ಗ್ಯಾಸ್ಟ್ರಿಕ್ ಇಂತಹ ಅನೇಕ ರೋಗಗಳಿಂದ ಮುಕ್ತಿ ಹೊಂದಬಹುದು ಬಿಕ್ಕಳಿಕೆ ,ಆಸಿಡಿಟಿಯನ್ನು, ಹಾಗೂ ಕಣ್ಣು ಹುರಿಯನ್ನು ಕಡಿಮೆಮಾಡುತ್ತದೆ.