ಇರುವೆಗಳು ತಮ್ಮ ತೂಕಕ್ಕಿಂತ ಎಷ್ಟು ಪಟ್ಟು ಜಾಸ್ತಿ ಭಾರಗಳನ್ನು ಹೊರುತ್ತವೆ ಗೊತ್ತಾ. ಅಬ್ಬಾ ಆಶ್ಚರ್ಯ ಪಡ್ತಿರಾ!

ಉಪಯುಕ್ತ
ಜಗತ್ತಿನಲ್ಲಿ ಮನುಷ್ಯರಿಗಿಂತ ಇರುವೆಗಳ ಸಂಖ್ಯೆ ಹೆಚ್ಚಿದೆ. ಇರುವೆ ಒಂದು ಚಿಕ್ಕ ಪ್ರಾಣಿ  ಇವು ಗುಂಪಾಗಿ ಜೀವನ ನಡೆಸುತ್ತವೆ. ಸಿಹಿ ಪದಾರ್ಥಗಳನ್ನು ಎಲ್ಲೆ ಇಟ್ಟರು ಇರುವೆಗಳಿಂದ ತಪ್ಪಿಸಿಡಲು ಸಾಧ್ಯವಿಲ್ಲ. ಯಾಕೆಂದರೆ ಇರುವೆಗಳಿಗೂ ಸಿಹಿ ಪದಾರ್ಥಕ್ಕೂ ಎಲ್ಲಿಲ್ಲದ ನಂಟು. ಇರುವೆಗಳು ಸಂಘ ಜೀವಿಗಳು ಎಲ್ಲೆ ಹೋದರು ಸರಿ ಗುಂಪು ಗುಂಪಾಗಿ ಹೋಗುತ್ತವೆ.

ಇರುವೆಗಳ ಬಗ್ಗೆ ಗೊತ್ತಿಲ್ಲದ ಸಂಗತಿಗಳನ್ನು ನಾವು ತಿಳಿಸುತ್ತೆವೆ ಇರುವೆಗಳು ಸಿಹಿ ಪದಾರ್ಥಗಳನ್ನು ಹುಡಿಕೊಂಡು ಹೋಗಲು ಕಾರಣವಿದೆ. ತಮ್ಮ  ವಿಶೇಷ ವಾಸನೆ ಗ್ರಂಥಿಯಿಂದ ಇರುವೆಗಳು ಸಿಹಿಯನ್ನು ಹುಡುಕಿಕೊಂಡು ಹೋಗುತ್ತವೆ. ಇವುಗಳ ಮೂಗು ತುಂಬಾ ಸೂಕ್ಷ   ಆದ್ದರಿಂದ ತುಂಬಾ ದೂರದ ಮಟ್ಟಿಗೆ ಗ್ರಹಿಸುವ ಮೂಲಕ ಆಹಾರವನ್ನು ಹುಡುಕಲು ಹೋಗುತ್ತವೆ.

ಇನ್ನೊಂದು ವಿಶೇಷವೆಂದರೆ ಇರುವೆಗಳು ತನ್ನ ಸಾಮಾರ್ಥ್ಯಕ್ಕಿಂತ 50ರಷ್ಟು ಪಟ್ಟು ಭಾರ ಎತ್ತುವ ಸಾಮಾರ್ಥ್ಯವನ್ನು ಹೊಂದಿವೆ. ಇರುವೆಗಳಲ್ಲಿ ಜಗಳವೆನಾದರೂ ಆದರೆ ಒಂದು ಅಥವಾ ಎರಡು ಇರುವೆಗಳು ಸಾಯುವವರೆಗೂ ಜಗಳವನ್ನು ಮುಂದುವರೆಸುತ್ತವೆ

ಇರುವೆಗಳಲ್ಲಿ ಎರಡು ಹೊಟ್ಟೆಗಳಿದ್ದು ಒಂದರಲ್ಲಿ ತಮಗೆ ಬೇಕಾದ ಆಹಾರವನ್ನು ಇಟ್ಟುಕೊಂಡಿರುತ್ತದೆ ಇನ್ನೊಂದು ಹೊಟ್ಟೆಯಲ್ಲಿ ಉಳಿದ ಇರುವೆಗಳಿಗೆ ಹಂಚಲು ಆಹಾರವನ್ನು ಸಂಗ್ರಹಿಸುತ್ತದೆ

ಗಂಡು ಇರುವೆಗಳು ಮಿಲನಕ್ಕೆ ಮಾತ್ರ ಸೀಮಿತ. ಇವುಗಳು ರಾಣಿ ಇರುವೆಯೊಂದಿಗೆ ಮಿಲನ ಮಾಡಿದ  ನಂತರ ಸಾಯುತ್ತವೆ. ಆದರೆ ರಾಣಿ ಇರುವೆಗಳು 30 ವರ್ಷದವರೆಗೂ ಜೀವಿಸಬಲ್ಲವು .ರಾಣಿ ಇರುವೆ ತನ್ನ ಜೀವಿತದಲ್ಲಿ ಲಕ್ಷಾಂತರ ಮರಿಗಳಿಗೆ ಜನ್ಮ ನೀಡುತ್ತದೆ

Leave a Reply

Your email address will not be published. Required fields are marked *