ಆಧುನಿಕ ಪ್ರೇಮಿಗಳು ರಾಧಾಕೃಷ್ಣರ ಪ್ರೇಮದಿಂದ ಕಲಿಬೇಕಾದ ಅಮೂಲ್ಯ ಪ್ರೀತಿ ಹಾಗೂ ಜೀವನಪಾಠಗಳೆಂದರೇ.?

ಭಕ್ತಿ

ರಾಧಾ ಕೃಷ್ಣರ ಈ ಎರಡು ಹೆಸರುಗಳನ್ನು ಬೇರೆ ಬೇರೆಯಾಗಿ ಇಂದಿಗೂ ಸಹ ಕರೆಯಲಾಗುವುದಿಲ್ಲ. ಇಬ್ಬರ ಹೆಸರುಗಳನ್ನು ಒಬ್ಬರ ಹೆಸರುಗಳಲ್ಲಿಯೇ ಕರೆಯಲಾಗುತ್ತದೆ. ರಾಧಾ ಇಲ್ಲದೇ ಕೃಷ್ಣ ಅಪೂರ್ಣ, ಕೃಷ್ಣ ಇಲ್ಲದೇ ರಾಧಾ ಎಂದಿಗೂ ಪೂರ್ಣವಾಗಲು ಸಾಧ್ಯವಿಲ್ಲ. ನಿಜವಾದ ಪ್ರೀತಿಯ ಅರ್ಥಕ್ಕೆ ಹೊಸ ವ್ಯಾಖ್ಯಾನ ನೀಡಿದವರು ರಾಧೆಕೃಷ್ಣ.

ಆಧುನಿಕ ಪ್ರೇಮಿಗಳು ರಾಧಾಕೃಷ್ಣರ ಪ್ರೀತಿಯಿಂದ ಹೊರ ಪಾಠವನ್ನು ಕಲಿಯಬಹದು. ಎಷ್ಟೋ ಸಹಸ್ರಮಾನ ವರ್ಷಗಳ ನಂತರವೂ ಈ ದೈವಿಕಾ ಪ್ರೇಮಿಗಳನ್ನು ಇಂದಿಗೂ ಸಹ ಒಟ್ಟಿಗೆ ಪೂಜಿಸಲಾಗುತ್ತದೆ.  ರಾಧಾ ಕೃಷ್ಣರ ಪ್ರೀತಿ ಇಡೀ ವಿಶ್ವವನ್ನು ಒಟ್ಟಿಗೆ ಬಂಧಿಸುವ ಭಾವನೆಯಾಗಿದೆ. ನಮ್ಮ ಯುವ ಪ್ರೇಮಿಗಳು ಅಮರ ಪ್ರೇಮಿಗಳಾದ ರಾಧಾ ಕೃಷ್ಣರಿಂದ ಕಲಿಯಬಹುದಾದ ಅಮೂಲ್ಯ ಪ್ರೀತಿ ಮತ್ತು ಜೀವನ ಪಾಠಗಳನ್ನು ನಿಮ್ಮ ಮುಂದೆ ತರುವ ಪ್ರಯತ್ನ ಮಾಡುತ್ತಿದ್ದೇವೆ.

 1.ನಿಮ್ಮ ಸಂಗಾತಿಯ ಬಗ್ಗೆ ಭಕ್ತಿ ಇರಲಿ

ಶಕ್ತಿ ದೇವಿಯ ಅವತಾರ ಎಂದು ಕರೆಯಲ್ಪಡುವ ರಾಧಾ ಕೃಷ್ಣನ ಕಟ್ಟಾ ಭಕ್ತೆ. ನೀವು ನಿಮ್ಮ ಸಂಗಾತಿಯನ್ನು ಪ್ರೀತಿಸುತ್ತಿದ್ದರೇ ರಾಧಾ ಶ್ರೀ ಕೃಷ್ಣನ ಬಗ್ಗೆ ಇಟ್ಟಿದಂತಹ ಸಂಪೂರ್ಣ ಶ್ರದ್ದೆಯನ್ನು ನಿಮ್ಮ ಸಂಗಾತಿಯ ಮೇಲೆ ಇಡೀ ನಿಮ್ಮ ಸನ್ನೆಗಳ ಮೂಲಕ ಅದನ್ನ ತೋರ್ಪಡಿಸಿ.

2.ಸಂಬಂಧದಲ್ಲಿ ತಾಳ್ಮೆ ಇರಲಿ  

ರಾಧಾ ಹುಟ್ಟಿದ ತಕ್ಷಣ ಕಣ್ಣು ಬಿಟ್ಟಿಲಿಲ್ಲ. ಕೃಷ್ಣನ ಸ್ಪರ್ಶದಿಂದ ರಾಧಾಳು ಕಣ್ಣು ತೆರೆದಳು ಎಂದು ನಂಬಲಾಗಿದೆ . ಉತ್ತಮ ಪ್ರೀತಿ ಪರಿಶ್ರಮ ಅಪಾರ ತಾಳ್ಮೆಯ ಮೂಲಕ ಬರುತ್ತದೆ ಎಂದು ರಾಧಾ ಕೃಷ್ಣ ಇಡೀ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ನಿಮ್ಮ ಸಂಗಾತಿಯ ಬಗ್ಗೆ ನಿಮಗೆ ಕರಿಕಿರಿ ಉಂಟುಮಾಡುವ ವಿಷಯಗಳಿದ್ದರೇ ಜಗಳಕ್ಕೆ ಇಳಿಯುವ ಬದಲು ಅವರೊಂದಿಗೆ ತಾಳ್ಮೆಯಿಂದ ಮಾತನಾಡಿ.  ಎಲ್ಲ ಸಂಬಂಧಗಳು ಕಾಲ ಕಾಲಕ್ಕೆ ರಾಧಾ ಕೃಷ್ಣರಂತಯೇ ಅರ್ಥವಾಗುತ್ತವೆ. ಹಾಗಾಗಿ ತಾಳ್ಮೆ ಇರಲಿ

3.ನಿಮ್ಮ ಪ್ರೀತಿಯಿಂದ ಶಕ್ತಿಯನ್ನು ಪಡೆದುಕೊಳ್ಳಿ

ಭೂಮಿಯ ಮೇಲೆ ವಿಷ್ಣುವಿನ ಎಂಟನೇ ಅವತಾರವಾಗಿದ್ದ ಶ್ರೀ ಕೃಷ್ಣನು ತನ್ನ ಶಕ್ತಿಯನ್ನು ರಾಧಾಳಿಂದ ಪಡೆದನು ಶ್ರೀ ಕೃಷ್ಣನು ರಾಧಾಳು ಅವಲಂಭಿಸಿದಂತೆ ನಿಮ್ಮ ಸಂಗಾತಿಯನ್ನು ನಿಮ್ಮ ಶಕ್ತಿಯನ್ನಾಗಿ ಮಾಡಿ ಅದು ನಿಮ್ಮ ದೌರ್ಬಲ್ಯವಾಗುವುದಿಲ್ಲ.

4.ನಿಮ್ಮ ಸಂಗಾತಿಯೊಂದಿಗೆ ಆತ್ಮ ಮಟ್ಟದಲ್ಲಿ ಸಂಪರ್ಕ ಸಾಧಿಸಿ

ನೀವು ಆಳವಾಗಿ ನಿಮ್ಮ ಸಂಗಾತಿಯೊಂದಿಗೆ ಆತ್ಮ ಮಟ್ಟದಲ್ಲಿ ಸಂಪರ್ಕ ಹೊಂದಿದಾಗ ಅಂತಹ ಭಾವನೆಗಳು ಪರಿಶುದ್ದವಾಗಿರುತ್ತವೆ.ಕೃಷ್ಣ ಮಾಡಿದ್ದು ಇದೇ ಕೆಲಸ ರಾಧೆಯೊಂದಿಗೆ ಆತ್ಮ ಮಟ್ಟದಲ್ಲಿ ಸಂಪರ್ಕ ಸಾಧಿಸಿ ಜಗತ್ತಿನಲ್ಲಿ ಅಮರ ಪ್ರೇಮಿಗಳಾದರು. ರಾಧಾ ಕೃಷ್ಣರಂತೆ ಪರಸ್ಪರ ಆತ್ಮವನ್ನು ಸ್ಪರ್ಶಿಸಲು ಪ್ರಯತ್ನಿಸಿ. ಆಗ ಎಲ್ಲ ಸಂಬಂಧಗಳು ಸದೃಡವಾಗುತ್ತವೆ.

ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ, ಧನ್ಯವಾದಗಳು

Leave a Reply

Your email address will not be published. Required fields are marked *