ಅಜೀರ್ಣ ಸಮಸ್ಯೆ ಕಾಡುತ್ತಿದಿಯೇ …? ಅಜೀರ್ಣ ಹೋಗಲಾಡಿಸಲು ಇವೇ ಸರಳ ಮನೆಮದ್ದುಗಳು

ಅರೋಗ್ಯ

ಅಜೀರ್ಣದ ಲಕ್ಷಣಗಳೆಂದರೆ ಹುಳಿತೇಗು, ಗುಡುಗುಡು ಶಬ್ದ ಮಾಡುವ ಹೊಟ್ಟೆ, ಹೊಟ್ಟೆಯಲ್ಲಿ ಉರಿ, ಎದೆಯಲ್ಲಿ ಉರಿ ಇಂತಹ ಅಜೀರ್ಣ ಸಮಸ್ಯೆಯಿಂದ ಎಲ್ಲರು ಬಳಲುತ್ತಿರುತ್ತಾರೆ. ಇಂತಹ ಅಜೀರ್ಣವನ್ನು   ಹೋಗಲಾಡಿಸಲು ಇವೇ ಸರಳವಾದ ಮನೆ ಮದ್ದುಗಳು. ಖಂಡಿತ ನೀವು ಇವುಗಳನ್ನು ಪಾಲಿಸಿದರೆ ಅಜೀರ್ಣ ಸಮಸ್ಯೆಯಿಂದ ಮುಕ್ತಿ ಹೊಂದುತ್ತೀರಿ

ನೀವು ಮಾಡಬೇಕಾದ್ದು ಏನು  ?

ಅಜೀರ್ಣ ಉಂಟಾದಾಗ ಹೆಚ್ಚಾಗಿ ನೀರು ಕುಡಿಯಬೇಕು, ಇದು ಹೊಟ್ಟೆಯಲ್ಲಿರುವ ಉರಿಯನ್ನು ಕಡಿಮೆ ಮಾಡುತ್ತದೆ ಬಾಯಿಯಲ್ಲಿ ಒಂದು ಲವಂಗವನ್ನು ಹಾಕಿಕೊಂಡು ಚಪ್ಪರಿಸುತ್ತಿರಿ ನಿಂಬೆ ಹಾಗೂ ಶುಂಟಿಯ ಚೂರನ್ನು ಸೇವಿಸುವುದರಿಂದಲೂ ಅಜೀರ್ಣದಿಂದ ಮುಕ್ತಿ ಹೊಂದಬಹುದಾಗಿದೆ

ಸೌತೇಕಾಯಿಯು ಅಜೀರ್ಣಕ್ಕೆ ಅತ್ಯಂತ ಪರಿಣಾಮಕಾರಿ ಔಷದಿ ಅಜೀರ್ಣ ಉಂಟಾದಾಗ ಕೆಲವು ದಿನಗಳವರೆಗೆ ಸೌತೇಕಾಯಿಯನ್ನು ಸೇವಿಸುವುದರಿಂದ ಅಜೀರ್ಣವನ್ನು ಹೋಗಲಾಡಿಸಬಹುದು  ಅರ್ಧ ಲೋಟ ನೀರಿಗೆ ಅರ್ಧ ಚಮಚ ಬೇಕಿಂಗ್ ಸೋಡ ಬೆರೆಸಿ ಕುಡಿಯುವುದರಿಂದ ಅಜೀರ್ಣಕ್ಕೆ ತಕ್ಷಣವೇ ಪರಿಹಾರ ಕಂಡುಕೊಳ್ಳಬಹದು

ಅಜೀರ್ಣದಿಂದ ಎದೆ ಉರಿ ಉಂಟಾದಾಗ ಚಕ್ಕೆ ಲವಂಗ ಏಲಕ್ಕಿ ಮುಂತಾದ ಮಸಾಲೆ ಪದಾರ್ಥಗಳನ್ನು ಕಷಾಯ ಮಾಡಿ ಕುಡಿದರೆ ಅಜೀರ್ಣ ಶಾಶ್ವತ ವಾಗಿ ನಮ್ಮಿಂದ ದೂರಾಗುತ್ತದೆ

Leave a Reply

Your email address will not be published. Required fields are marked *